Friday, January 27, 2017

Kannada Play Day - reminder for 01/28/2017

ನಮಸ್ಕಾರ ಎಲ್ಲರಿಗೂ!

ಮಕ್ಕಳೆಲ್ಲಾ ಶನಿವಾರ ಬರೋದಕ್ಕೆ ಕಾಯ್ತಾ ಇರೋ ತರಹ ಇದೆ! ಹೌದು, ಈ ಶನಿವಾರ 
ಯಥಾ ಪ್ರಕಾರ ನಮ್ಮ ಶ್ರೀಮಾನ್ ಮಲ್ಲಿಕ್ ಅವರ ಮನೆಯಲ್ಲೇ ಮಧ್ಯಾಹ್ನ 
3 ಗಂಟೆಗೆ ಭೇಟಿಯಾಗೋಣ. ದಯವಿಟ್ಟು ಒಮ್ಮೆಯಾದರೂ ನಿಮ್ಮ ಮಕ್ಕಳಿಗೆ 
ಕನ್ನಡ ಅಕ್ಷರಾಭ್ಯಾಸ ಮಾಡಿಸಿ. ಕನ್ನಡದಲ್ಲೇ ಮಾತನಾಡಿಸಿ.

ಒಂದು ಚಿಕ್ಕ ಸಂಗತಿ. ಏನಪ್ಪಾ ಅಂದ್ರೆ - ನಮ್ಮ ವಿದ್ಯಾರ್ಥಿನಿ ಮಾನಸಾಗೆ  ಕನ್ನಡ
ಯಾಕೆ ಕಲಿ ಬೇಕು ಅಂತ ಕೇಳಿದ್ರೆ, ಅವಳು ಹೇಳಿದ್ಲು - 'ಕನ್ನಡದಲ್ಲಿ ಒಂದು
ಕವಿತೆ ರಚನೆ ಮಾಡಬೇಕು ಅಂಕಲ್'! ನೋಡಿ ಹೇಗಿದೆ ಅವಳ ಆಸೆ?  ಹೋದ ವಾರ 
ಅವಳ ಹುಟ್ಟಿದ ಹಬ್ಬಾನೂ ಇತ್ತು. 

ಅದರ ಬಗ್ಗೆ - 

ಹೋದ ವಾರ ಆಚರಿಸಿದ್ಲು ಹುಟ್ಟಿದ್ ಹಬ್ಬಾನ  
ಅವರಪ್ಪ ಕೇಳಿದ್ರಂತೆ ಏನು ಬೇಕು ಅಂತ ಮಾನಸಾನ
ಚಾಕಲೆಟ, Cakeಅ, ಅಥವಾ ಏನಾದರೂ ಬಟ್ಟೆ ಬರೆನಾ?
ಹೇಳಿದ್ಳಂತೆ - ಕಲೀಬೇಕ್ಬರೆಯೋದಕ್ಕೆ ಕನ್ನಡದಲ್ಕವಿತೇನ!
ನಡೀ ಮಗಳೇ,  ಮಲ್ಲಿಕ್ ಮನೇಲ್ಕನ್ನಡ ಕಲಿಯೋಣ!

ನೋಡೋಣ!
Kannada Play Day Team

Kannada Play Day 01/20/17 - Cancelled

ನಮಸ್ಕಾರ!

Due to shortage of teachers and senior students, there will be no class tomorrow!

ನಾಳೆ ದಿನ ರಜ..
ಮಾಡಿರಿ ಮಜಾ!!

ಆದರೆ, ಹಿರಿಯ ಮಕ್ಕಳಿಗೆ ಪದಬಂಧ ಮನೆಗೆಲಸ ಕೊಟ್ಟಿದ್ದೇವೆ. ಅವರೇ ಮಾಡಿ ಮುಂದಿನ ವಾರ ಮಾಡಿಕೊಂಡು ಬರಬೇಕು. Please see attached. 

ತಂದೆ ತಾಯಿಯರು ಕಿರಿಯ ಮಕ್ಕಳಿಗೆ ಅಕ್ಷರಗಳನ್ನು ಮನೆಯಲ್ಲಿ ಅಭ್ಯಾಸ ಮಾಡಿಸಬೇಕಾಗಿ ವಿನಂತಿ. ಮಕ್ಕಳಿಗೆ ಈ ವಾರದ ಮನೆ ಕೆಲಸ:
೧. ಎಲ್ಲ ಅಕ್ಷರಗಳನ್ನು ಕಲಿತು ಗುರುತುಹಿಡಿಯಬೇಕು.
೨. ಪ್ರತಿಯೊಂದು ಅಕ್ಷರದಿಂದ ೩-೫ ಪದಗಳನ್ನು ಹೇಳಬೇಕು.

ಹೋದ ವಾರ ಶ್ರೀಕಾಂತ್ ಅವರು ಮತ್ತೊಂದು ಕನ್ನಡದ ಪದ್ಯ (ನಾವೆಲ್ಲಾ ಒಂದಾನೊಂದು ಕಾಲದಲ್ಲಿ ಕಲಿತಿದ್ದು!) - ಬಣ್ಣದ ತಗಡಿನ ತುತ್ತೂರಿ - ಹಿರಿಯ ಮಕ್ಕಳಿಗೆ 
ಹೇಳಿಕೊಟ್ಟರು. ಮಕ್ಕಳೆಲ್ಲ ಓದುವುದಕ್ಕೆ ಪ್ರಯತ್ನಪಟ್ಟರು. ಕೆಲವರು ಸುಲಭವಾಗೇ ಓದಿದರು.  ಅವರ ಕೈಯಲ್ಲಿ ಮತ್ತೊಂದು ಸಲ ದಯವಿಟ್ಟು ಓದಿಸಿ.

ಮೀನಾ ಅವರು ಎಂದಿನಂತೆ ಕಿರಿಯರಿಗೆ ಏನು ಮಾಡಿಸಿದರು ಅಂತ ಇ-ಪತ್ರದ ಮೂಲಕ ತಿಳಿಸಿದ್ದಾರೆ.

ಜನವರಿ ೧೪, ೨೦೧೭ 'ಕನ್ನಡ ಕಲಿ'ಯಲ್ಲಿ ಮಾಡಿದ ಪಾಠ ಕೆಳಗೆ ಬರೆದಿದ್ದೇನೆ.

೧. ಮಕ್ಕಳಿಗೆ ಚಾರ್ಟ್ ಮೂಲಕ ಮತ್ತೆ ಅಕ್ಷರಗಳೆಲ್ಲವನ್ನು ಅಭ್ಯಾಸ ಮಾಡಿಸಿದೆವು.
೨. ಚಾರ್ಟ್ನಲ್ಲಿ ತೋರಿಸಿದರೆ ಮಕ್ಕಳು ಅಕ್ಷರಗಳನ್ನು ಗುರುತು ಹಿಡಿಯುತ್ತಾರೆ. ಆದರೆ ಚಾರ್ಟ್ ಇಲ್ಲದೆ ಫ್ಲಾಶ್ ಕಾರ್ಡ್ಸ್ ಉಪಯೋಗಿಸಿದಾಗ ಮಕ್ಕಳು ಇನ್ನೂ ಅಕ್ಷರಗಳನ್ನು ಗುರುತಿಸಲು ಕಷ್ಟ ಪಡುತ್ತಿದ್ದಾರೆ. 
೩. ಅಕ್ಷರಗಳನ್ನು ತೋರಿಸಿ ಪದಗಳನ್ನು ಹೇಳಿಸಿದೆವು. ಕೊಟ್ಟ ಅಕ್ಷರದಿಂದ ಸುಮಾರು ಮಕ್ಕಳು ೪-೫ ಪದಗಳನ್ನು ಹೇಳಿದರು.
೪. ಕಾಗುಣಿತವನ್ನು ಪ್ರಥಮ ಬಾರಿ ಹೇಳಿಕೊಟ್ಟೆವು. ಒಂದು ಸಲ ಹೇಳಿ ಕೊಟ್ಟ ನಂತರ, ಎಲ್ಲ ಮಕ್ಕಳಿಗೂ ಒಂದೊಂದು ಅಕ್ಷರವನ್ನು ಕೊಟ್ಟು ಅದರ ಕಾಗುಣಿತವನ್ನು ಹೇಳಿಸಿದೆವು. 
೫. ಕೊನೆಯದಾಗಿ ಫ್ಲಾಶ್ ಕಾರ್ಡ್ಸ್ ಉಪಯೋಗಿಸಿ ಅಕ್ಷರಗಳ ಕ್ವಿಜ್ ಮಾಡಿದೆವು. ಸುಮಾರು ಮಕ್ಕಳು ಅಕ್ಷರಗಳನ್ನು ಗುರುತು ಹಿಡಿಯಲೇ ಇಲ್ಲ.

ಹೀಗೆಯೇ ಒಂದು ಚುಟುಕ - 

ಬಂದಿತಿನ್ನೊಂದು ಶನಿವಾರ
ನನಗಿದೆ ಆಫೀಸಿನ ತಲೆಭಾರ
ಏನು ಮಾಡುವುದೋ ಗೊತ್ತಾಗಲಿಲ್ಲ 
 ಹೇಳಿದಳು ನನ್ನಾಕೆ - ತಗೋ Tylenolಅ!

ನೋಡುವ ಮುಂದಿನ ಶನಿವಾರ!

Kannada Kali Team

Thursday, January 12, 2017

Kannada Play Day - 01/07/17

ಮಹಾ ಜನಗಳೇ, ತಾಯಿ ತಂದೆಯರೆ, ಮತ್ತು ಮಕ್ಕಳೇ,

ಏನಪ್ಪಾ ಇದು ಭಾಷಣ ಶುರುಮಾಡಿದರು ಇವ್ರು ಅಂದ್ಕೊಂಡ್ರಾ? ಇಲ್ಲಪ್ಪಾ, ಸುಮ್ನೆ ಅಷ್ಟೇ!ಹೋದ ಶನಿವಾರ ಏನೇನ್ ಮಾಡಿದ್ವಿ ಅಂತ ಹೇಳೋಕ್ಕೆ ಈ ಇ-ಪತ್ರ ಅಷ್ಟೆ. ಆ ನಡುಗೋ ಚಳಿ ಕಳೆದು ಸ್ವಲ್ಪ ಬೆಚ್ಚಗಾಗೋ ಹಾಗಿರುವಾಗ ಈ ಶನಿವಾರ ಸ್ವಲ್ಪ ಕನ್ನಡ ಕಲಿಬೋದಲ್ವೆ? ಸಂಕ್ರಾಂತಿ ಬೇರೆ! ಒಳ್ಳೆ ಶುಭ ದಿನ!

Anyway, ಶ್ರೀಕಾಂತ್ ಅವರು ಹಿರಿಯ ಮಕ್ಕಳಿಗೆ ಒಂದು ಪ್ರಸಿದ್ಧವಾದ ಪದ್ಯ ಶುರು ಮಾಡಿದರು. ಯಾವುದಪ್ಪ ಅಂದ್ರೆ - 'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?' ಓದುವುದಕ್ಕೂ ಸುಲಭ, ಅರ್ಥ ಆಗುವುದಕ್ಕೂ ಸುಲಭ ಅಂತ. ನಿಮ್ಮ ಮಕ್ಕಳಿಗೆ ಓದಿಕೊಂಡು ಬರಬೇಕು ಅಂತ ತಿಳಿಸಿದ್ದಾರೆ. ಸ್ವಲ್ಪ ಅವರ ಕೈಯಲ್ಲೇ ಓದಿಸಿ. 

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು.
ನಾಯಿ ಮರಿ ಕಳ್ಳ ಬಂದರೆ ಏನು ಮಾಡುವೆ.
ಕುಂಯ್ ಕುಂಯ್ ಬೌ ಬೌ ಎಂದು ಕೂಗಿ ಓಡಿಸುವೆ.
ನಾಯಿಮರಿ ನಾನು ಹೋಗಿ ತಿಂಡಿ ತರುವೆನು
ನಿನ್ನ ಮನೆಯ ನಾನು ಕಾಯುತಿರುವೆನು.

ಚಿಕ್ಕ ಮಕ್ಕಳಿಗೆ ಮೀನಾ ಅವರು ಹೀಗೆ ತಿಳಿಸಿದ್ದಾರೆ. 
೧. ಎಲ್ಲ ಮಕ್ಕಳು ಅ ಇಂದ ಅಹವರೆಗೂ ಮತ್ತು ಕ ಇಂದ ಜ್ಞವರೆಗೂ ಅಕ್ಷರಗಳನ್ನು ಚಾರ್ಟ್ನಲ್ಲಿ ಓದಿ ಹೇಳಿದರು.
೨. ಎಲ್ಲ ಮಕ್ಕಳಿಗೂ ಚಾರ್ಟ್ ಮೂಲಕ ಅಲ್ಲೊಂದು ಇಲ್ಲೊಂದು ಅಕ್ಷರಗಳನ್ನು ತೋರಿಸಿ ಗುರುತು ಹಿಡಿಯಲು ಹೇಳಿದೆವು. ಎಲ್ಲ ಮಕ್ಕಳು ಚೆನ್ನಾಗಿ ಅಕ್ಷರಗಳನ್ನು ಗುರುತು ಹಿಡಿದರು.
೩. ಚಾರ್ಟ್ ಮೂಲಕ ಎರಡು ಅಕ್ಷರಗಳನ್ನು ತೋರಿಸಿ ಅವರಿಗೆ ಅದನ್ನು ಗುರುತಿಸಿ ಓದಲು ಹೇಳಿದೆವು ಮತ್ತು ಹೇಗೆ ಅದರಿಂದ ಒಂದು ಅರ್ಥಪೂರ್ಣ ಪದವನ್ನು ಮಾಡಬಹುದು ಎಂದು ಹೇಳಿಕೊಟ್ಟೆವು.
೪. ಗಜ, ನರ, ಮರ, ತಳ, ಕದ, ಸರ, ರಸ,ಬಲ, ಎಡ, ವನ ಹೀಗೆ ಅನೇಕ ಎರಡು ಅಕ್ಷರದ ಪದಜೋಡಣೆಯನ್ನು ಮಾಡಿಸಿ ಆ ಪದಗಳ ಅರ್ಥಗಳನ್ನು ಹೇಳಿ ಕೊಟ್ಟೆವು.
೫. ಇದಲ್ಲದೆ ಎರಡು ಅಕ್ಷರಗಳು ಅಲ್ಲಲ್ಲಿ ತೋರಿಸಿ ಅವುಗಳನ್ನು ಗುರುತಿಸಲು ಹೇಳಿದೆವು. ಎಲ್ಲ ಮಕ್ಕಳು ಚೆನ್ನಾಗಿ ಗುರುತಿಸಿ ಹೇಳಿದರು.
೬. ಕೊನೆಯದಾಗಿ ನಾಳೆ ಪ್ರಿಯಾಳ ಹುಟ್ಟು ಹಬ್ಬ ಎಂದು ತಿಳಿದಾಗ, ಎಲ್ಲ ಮಕ್ಕಳಿಗೂ ಅವಳಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಕನ್ನಡದಲ್ಲಿ ಹೇಳಿಸಿದೆವು.

ಬರುತಿದೆ ಮಕರ ಸಂಕ್ರಾಂತಿ,
ಬೆಳಗಲಿ ನಿಮ್ಮೊಳಗಿನ ಕಾಂತಿ,
ತರಲಿ ಎಲ್ಲರಿಗೂ ಸುಖ ಶಾಂತಿ.

ಹಬ್ಬದ ಶುಭಾಶಯಗಳೊಂದಿಗೆ,

ನಿಮ್ಮವರೇ,
ಕನ್ನಡ ಕಲಿ Team

Thursday, October 13, 2016

ಕನ್ನಡ ಶಾಲೆ - 10/೦೮/೨೦೧೬

ನಮಸ್ಕಾರ!
ಬಹಳ ದಿನಗಳಾದ ಮೇಲೆ ನಮ್ಮ ಭೇಟಿ. ಸ್ವಲ್ಪ ದಸರ ಹಬ್ಬದ ಗಲಾಟೆಯಲ್ಲಿ ಬರೆಯಲಿಕ್ಕಾಗಲಿಲ್ಲ.
ಹೋದ ಶನಿವಾರ ಮೂರೇ ಮಕ್ಕಳಿದ್ದರು ಮೇಲ್ವರ್ಗದಲ್ಲಿ. ಆದ್ದರಿಂದ ಮೇಘ ಮತ್ತು ದಿಶಾ ಅವರನ್ನ ಸೇರಿಸಿಕೊಂಡು ಒಂದು ಕಿರು ನಾಟಕ ಮಾಡಿದೆವು. ಇಂಗ್ಲಿಷ್ನಲ್ಲಿ ಬರೆದಿರೋ ಕಥೆಯನ್ನು ಓದಿ, ಅವರಿಗೆ ಅರ್ಥ ಮಾಡಿಸಿದ ಮೇಲೆ ಎರಡು ಗುಂಪುಗಳನ್ನು ಮಾಡಿದೆವು. ಆ ಗುಂಪುಗಳು ಪರಸ್ಪರ ಮಾತನಾಡಿ, ಅವರುಗಳೇ ೨೫ ನಿಮಿಷಗಳ ಅವಧಿಯಲ್ಲಿ ಆ ಕಥೆಯನ್ನು ಮೂಲವಾಗಿಟ್ಟುಕೊಂಡು, ಕನ್ನಡದಲ್ಲಿ ಸಂಭಾಷಣೆ ಬರೆದು, ಕಿರುನಾಟಕ ಮಾಡಬೇಕು. ಇದು ಅವರಿಗೆ ಕೊಟ್ಟ assignment. ಚೆನ್ನಾಗಿಯೇ ಮಾಡಿದರೆಂದು ಹೇಳಬೇಕು. ಇಲ್ಲಿದೆ ನೋಡಿ ಸಂಪೂರ್ಣ ಕಥೆ - "ವಿಶೇಷ ಬೀಸಣಿಗೆ". ಇದನ್ನೇ ಸಿಂಚನ ದೀಪಾವಳಿಯ ಸಂದರ್ಭದಲ್ಲಿ ಮಾಡಿಸೋಣವೆಂದುಕೊಂಡಿದ್ದೇವೆ. ನೋಡೋಣ. ಎರಡನೇ ಮತ್ತು ಮೂರನೇ ಪುಟಗಳನ್ನು print ಮಾಡಿಕೊಂಡು ಬಂದರೆ ಒಳ್ಳೆಯದು.
ಚಿಕ್ಕಮಕ್ಕಳ ವರ್ಗದಲ್ಲಿ  ಮೈತ್ರೇಯನೆಂಬ ಹೊಸ ಹುಡುಗ ಬಂದಿದ್ದರಿಂದ ಎಲ್ಲಾ ಮಕ್ಕಳು ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಆಯಿತು. 'ಅ' ಇಂದ 'ಹ' ವರೆಗೂ ಅಕ್ಷರಗಳನ್ನು ಬರೆಸಿ ಪ್ರತಿಯೊಬ್ಬರ ಹತ್ತಿರ ಹಲವು ಬಾರಿ ಹೇಳಿಸಿದೆವು. ನಂತರ 'ಅ' ಮತ್ತು 'ಆ' ಅಕ್ಷರಗಳಿಂದ ಗೊತ್ತಿರುವ ಪದಗಳನ್ನು ಹೇಳಲು ಕೇಳಿದೆವು. ಬರೋ ಶನಿವಾರ ಎಂದಿನಂತೆ ನಮ್ಮ ಮನೆಯಲ್ಲೇ (ಸಮೀರ) ನಡೆಯುತ್ತದೆ. ತಪ್ಪದೆ ನಿಮ್ಮ ಮಕ್ಕಳನ್ನ ಕಳಿಸಿ. ಬರಕ್ಕಾಗದೆ ಹೋದರೆ, ದಯವಿಟ್ಟು ಇ-ಪತ್ರದ ಮುಖಾಂತರ ತಿಳಿಸಿ.
    

Tuesday, September 27, 2016

Welcome to the new year! Kannada Play Day held on 09/24/2016

ನಮಸ್ಕಾರ! ಬಹಳ ದಿನಗಳ ಮೇಲೆ ನಮ್ಮ ಭೇಟಿ! Hopefully, I will be more regular on posting this blog.

ಹೋದ ವಾರ ದೊಡ್ಡ ಮಕ್ಕಳಿಗೆ "ಸವಿ ಕನ್ನಡ" ಒಂದನೇ ತರಗತಿಯ ಅಭ್ಯಾಸ ಸಹಿತ ಪುಸ್ತಕದಿಂದ ಆಯ್ದ ಮೊದಲನೇ ಪಾಠದಿಂದ ಶುರು ಮಾಡಿದೆವು. ಚಿತ್ರ ತೋರಿಸಿ ಪದ ಹೇಳುವುದು, ಸರಳ ಪದಗಳನ್ನು ಓದುವುದು, ಹೀಗೆ ಕೆಲವು ಚಟುವಟಿಕೆಗಳನ್ನು ಮಾಡಿದೆವು. ನಂತರ "ಪ್ರತ್ಯುಪಕಾರ" ಎಂಬ ಕಥೆಯನ್ನು ಜೋರಾಗಿ ಓದಿದೆವು. ಅದರ ಸಾರಾಂಶವನ್ನು ತಿಳಿದುಕೊಂಡೆವು. ನಾವು ಆ ದಿನ ಏನು ಮಾಡಿದೆವು ಎಂದು ಗೊತ್ತಾಗಬೇಕಾದರೆ  ಈ link ಅನ್ನು ಒತ್ತಿ. ಇನ್ನೊಂದು ವಿಷಯ. ಮಕ್ಕಳಿಗೆ ಒಂದು assignment ಕೊಟ್ಟಿದ್ದೇವೆ. ಅವರು ಈ ಕಥೆಯನ್ನು ತಮ್ಮದೇ ವಾಕ್ಯಗಳಲ್ಲಿ ಹೇಳಿ ಅದನ್ನ record ಮಾಡಿಕೊಂಡು ಬರಬೇಕು.

For smaller kids, we had a new kid Arush. So we reviewed  some previous lessons as few of the other new students did not know how to introduce themselves in Kannada. 

1. Learn to introduce themselves, their dad, mom, brother (older and younger), sister (older, younger), grandpa and grandma in Kannada.
2. Learn the days of the week in Kannada.

We will follow "ಕನ್ನಡ ಪರಿಮಳ" text book for younger kids this year. More to come in the coming weeks.

ಮತ್ತೇನೂ ವಿಷಯವಿಲ್ಲ. ಬರೋ ಶನಿವಾರ ಮಲ್ಲಿಕ್ ಅಥವಾ ಶ್ರೀಕಾಂತ್ ಮನೆಯಲ್ಲಿ ಸೇರೋಣ. We will send an e-mail prior to that.







Tuesday, May 24, 2016

Last session for the academic year 2016-2016 (best viewed on a laptop or PC or Android devices)



ನಮಸ್ಕಾರ!

ಮೊದಲ ಮಾತೇನಂದರೆ - ಈ ಮಕ್ಮಳಿಗೆ ನಮ್ಮ ಕಡೆಯಿಂದ ಕನ್ನಡ ಹೇಳಿಕೊಡುವುದಕ್ಕೆ ನಂಬಿಕೆ ಮತ್ತು ಅಭಿಮಾನವಿಟ್ಟು ನಿಮ್ಮ ಮಕ್ಕಳನ್ನ ಕಳುಹಿಸಿ ಕೊಟ್ಟಿದ್ದಕ್ಕೆ  ತಾಯಿ ತಂದೆಯರಿಗೆ ಹೃತ್ಪೂರ್ವಕವಾದ ಧನ್ಯವಾದಗಳು! ಮತ್ತು ನೀವು teachersಗೆ ಪ್ರೀತಿಯಿಂದ ಕೊಟ್ಟ ಕಾಣಿಕೆಗಳಿಗೂ ಧನ್ಯವಾದಗಳು. ತಮ್ಮ ಕುಶಲತೆಯಿಂದ ತಯಾರಿಸಿ, ರುಚಿಯಾದ  'ಕನ್ನಡ ಕಲಿ' cake ಮಾಡಿ ಎಲ್ಲರಿಗೂ ತಿನಿಸಿದ್ದಕ್ಕೆ ಪ್ರಕಾಶ್ ಅವರಿಗೆ ಬಹಳ ಬಹಳ thanks!




ಭಾರತಿ ಮತ್ತು ಮಲ್ಲಿಕ್ ಅವರಿಗೆ ನಮ್ಮನ್ನೆಲ್ಲ ಸ್ವಾಗತಿಸಿ. ತಿಂಡಿ, ಟೀ,  ಕಾಫಿ supply ಮಾಡಿದ್ದಕ್ಕೆ ಅವರಿಗೂ ಬಹಳ thanks!



ಹೋದ ಶನಿವಾರ ನಮ್ಮ ಶಾಲೆಯ ೨೦೧೫-೨೦೧೬ ನೆ ಸಾಲಿನ ಕೊನೆಯ ದಿನ. ಪ್ರಾಧ್ಯಾಪಕರು(appropriate Kannada word, eh?) ಮೊದಲು ತಾವು ಏನೇನು ಪಾಠಗಳನ್ನ ಮಾಡಿದರು ಅಂತ ಹೇಳಿಕೊಂಡರು. ದೊಡ್ಡ ಮಕ್ಕಳ ಕನ್ನಡದಲ್ಲಿ ಮಾಡಿದ ಚಿಕ್ಕ ಭಾಷಣಗಳನ್ನ ಕೇಳಿ ಸಂತೋಷವಾಯಿತು. I was amazed at these kids the way they spoke and told us all what they learned. The way Amogh brings in sports somehow into his speech, Diya's fluency in her speech, Suhaas addressing each bullet point that I had asked him to talk, Manasa's perfect pronunciation and fluency, Nidhi's vocabulary, Raghav's honest statements about Kannada classes, and last but not the least, Vikram's sincere acknowledgement that he did not learn much but still wants to continue coming to the class - these things make the life of teacher worthwhile! Even the smaller kids were not hesitant to talk in Kannada in front of so many people!





ನಿಮಗೆಲ್ಲ ತಿಳಿದಿರೋ ಹಾಗೆ, ಒಂದು ನೂತನ ಭಾಷೆ ಕಲಿಯಬೇಕಾದರೆ ಮೊದಲು ಆ ಭಾಷೆಯ ಪದಗಳನ್ನು ಕೇಳಿಸಿಕೊಳ್ಳಬೇಕು. ನಂತರ ಮಾತನಾಡಲು ಯತ್ನಿಸಬೇಕು. ತದನಂತರ ಓದುವುದು ಮತ್ತು ಬರೆಯುವುದು. ಈ ವಿಧಾನವನ್ನೆ ನಾವು ಅನುಸರಿಸಲು ಪ್ರಯತ್ನ ಮಾಡಿದೆವು. ಮಕ್ಕಳಿಗೆ ಉಚ್ಚಾರಣೆ, ವ್ಯಾಕರಣ, ಮತ್ತು ಶಬ್ದಕೋಶ - ಇವುಗಳನ್ನು ಧ್ಯೇಯವಾಗಿಟ್ಟುಕೊಂಡು ಬೇರೆ ಬೇರೆ ವಿಧಾನಗಳಲ್ಲಿ ಹೇಳಿಕೊಟ್ಟೆವು. ಉದಾಹರಣೆಗೆ, ಹೋದ ವಾರ ತಿಳಿಸಿದಹಾಗೆ, ವಿಧ ವಿಧ ಹಣ್ಣುಗಳ ನಾಮಪದಗಳನ್ನು ಶ್ರೀಕಾಂತ್ ಅವರು 'ಹಣ್ಣು ಮಾರುವವನ ಹಾಡು' ಎಂಬ ಪದ್ಯದ ಮೂಲಕದಿಂದ ಹೇಳಿಕೊಟ್ಟರು. ಆಟಗಳ ಮೂಲಕ ಸಹ ಇವುಗಳನ್ನ ತಿಳಿಸಲು ಪ್ರಯತ್ನ ಪಟ್ಟೆವು. Jeopardy Game ಮೂಲಕ ವ್ಯಾಕರಣ, ಉಚ್ಚಾರಣೆಯನ್ನೂ,  'ರಾಮ ಕೃಷ್ಣ ' ಆಟದ ಮೂಲಕ ಸಂಖ್ಯೆಗಳನ್ನೂ, 'ಪದ ಬಂಧ' ದ ಮೂಲಕ ಪದಗಳನ್ನೂ ತಿಳಿಸಿಕೊಟ್ಟೆವು. 'ಕಣ್ಣಾ ಮುಚ್ಚಾಲೆ' ಆಟ ಆಡಿ ದಿಕ್ಕುಗಳನ್ನು ಕಲಿತೆವು. ಕತೆಗಳ ಮೂಲಕ ಚಿಕ್ಕ ಚಿಕ್ಕ ಪದಗಳನ್ನು ಓದುವದನ್ನು ತಿಲಿಸಿಕೊಟ್ಟೆವು. ಸಿಂಚನ ಆಚರಿಸಿದ 'ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ' ಸಂದರ್ಭದಲ್ಲಿ 'ಕರ್ನಾಟಕ ದರ್ಶನ' ಎಂಬ ಒಂದು ಕಿರು ನಾಟಕವಾಡಿ ರಾಜ್ಯದ ಬೇರೆ ಬೇರೆ ಪ್ರದೇಶಗಳ ಪ್ರಾಮುಖ್ಯತೆಯನ್ನು ಈ ಮಕ್ಕಳು ಬಹಳ ಚೆನ್ನಾಗಿ ಪ್ರದರ್ಶಿಸಿದರು.


ಚಿಕ್ಕ ಮಕ್ಕಳಿಗೆ ತಮ್ಮ ಹೆಸರು, ತಾಯಿ ಮತ್ತು ತಂದೆಯ ಹೆಸರು, ಮನೆಗೆ ಬಂದವರನ್ನು ಹೇಗೆ ಸ್ವಾಗತಿಸಬೇಕು ಎಂಬುದನ್ನು ಸಂಭಾಷಣೆ ರೂಪದಲ್ಲಿ ಹೇಳಿಕೊಟ್ಟೆವು.  ಅಕ್ಷರಗಳನ್ನು ಗುರಿತಿಸುವುದು, ಸರಳ ಪದಗಳ ಅಕ್ಷರಗಳನ್ನು ಜೋಡಿಸಿ ಓದುವುದು, ಹಣ್ಣು , ತರಕಾರಿ, ಬಣ್ಣಗಳನ್ನು ಗುರುತಿಸುವುದು, ಹೀಗೆ ಬಹಳಷ್ಟು ಪದಗಳನ್ನು ಕಲಿತರು. ಎಡಗಡೆ/ಬಲಗಡೆ,ಮುಂದೆ/ಹಿಂದೆ, ಅಲ್ಲಿ/ಇಲ್ಲಿ, ಇತ್ಯಾದಿ ಪರಿಕಲ್ಪನೆಗಳನ್ನು ತಿಳಿಸಿದೆವು. 'ನದಿ-ದಡ' ಆಟವನ್ನಂತೂ ಬಹಳ ಇಷ್ಟ ಪಟ್ಟು ಬೇಜಾರಿಲ್ಲದೆ ಪ್ರಾಯಶಃ ಪ್ರತಿಸಲವೂ ಆಡಿದರು.

ಈಗ ಮುಂದಿನ ವರ್ಷದ ಬಗ್ಗೆ ಸ್ವಲ್ಪ ಮಾತಾಡೋಣ. ಈ ಸಲ ಯಾವುದಾದರೂ textbook ಅನ್ನುಮೂಲವಾಗಿಟ್ಟುಕೊಂಡು ಅದನ್ನೇ ಅನುಸರಿಸೋಣವೆಂದು ಅಂದುಕೊಂಡಿದ್ದೇವೆ. ಈ ಬರುವ ಬೇಸಿಗೆ ದಿನಗಳಲ್ಲಿ ನಾವು ನಾಲ್ಕು ಜನರೂ - ಅಂದರೆ ಶ್ರೀಕಾಂತ್, ಮಲ್ಲಿಕ್, ಮತ್ತು ಮೀನಾ -  ಮುಂದಿನ ವರ್ಷದ lesson plan ಮಾಡೋಣವೆಂದುಕೊಂಡಿದ್ದೇವೆ. ಹಾಗೆಯೇ, ಈ ಮಕ್ಕಳಿಗೆ ಕನ್ನಡ ಮರೆಯಬಾರದೆಂದು ಒಂದು ಕಥೆಯೋ, ಪದ್ಯವೋ, ಸುದ್ದಿ ಸಮಾಚಾರವೋ, ಅಂತೂ ಏನೋ ಒಂದು ವಾರಕ್ಕೊಂದಂತೆ ಬರೆದು ಕಳಿಸೋಣವೆನ್ದುಕೊಂಡಿದ್ದೇನೆ. ನೋಡುವಾ, ಇದು ಹೇಗೆ ಆಗತ್ತೆ ಅಂತ!

'ಹೇಳಿದ್ದೆ ಹೇಳೋ ಕಿಸಬಾಯಿದಾಸ' ಅನ್ನೋ ತರಹ ಇವನೇನಪ್ಪ ತಿರುಗ ಹೇಳ್ತಾನೆ ಇವನು ಅಂತ ಬೇಜಾರು ಮಾಡ್ಕೋ ಬೇಡಿ! ಏನಪ್ಪಾ ಅಂದ್ರೆ, ಅದೇ ಮಕ್ಕಳ ಜೊತೆ ಅಪ್ಪ ಅಮ್ಮಂದಿರು ಕನ್ನಡದಲ್ಲಿ ಮಾತಾಡೋದು. ಈ ಬೇಸಿಗೆ ರಜದಲ್ಲಿ ದಯವಿಟ್ಟು enforce ಮಾಡಿ.

ಒಂದು ವಿಷಯ ಹೇಳೋದು ಮರೆತುಬಿಟ್ಟೆ. ನಮ್ಮ ಚಿಕ್ಕ ಮಕ್ಕಳ ಗುಂಪಿನಿಂದ ದಿಶ ಷಣ್ಮುಗಪ್ಪ ಮೇಸನ್ ಬಿಟ್ಟು ಪುನಃ Boston ಗೆ ತೆರಳಲಿದ್ದಾರೆ. ಅವಳಿಗೆ, ಕುಮಾರ್ ಅವರಿಗೆ, ಸ್ಮಿತಾ ಅವರಿಗೆ, ಹಾಗು ದಿಶಾ ತಮ್ಮ ಸನತ್ ಗೆ ನಮ್ಮ ಕಡೆಯಿಂದ ವಿದಾಯ ಹೇಳುವ. ಬೇಕಾದಷ್ಟು ಕನ್ನಡ ಪುಸ್ತಕಗಳನ್ನ ದಾನ ಮಾಡಿದ ನಾಗಾನಂದ್ ಮತ್ತು ಲಕ್ಷ್ಮಿ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ ಅವರಿಗೂ ಸಹ ವಿದಾಯ ಹೇಳುವ.

ಇವತ್ತಿಗೆ ಇಷ್ಟು ಸಾಕಲ್ವೆ? ನೋಡೋಣ ಮುಂದಿನ ಸಲ.

Have a wonderful summer!



 




  

Tuesday, May 17, 2016

Kannada Play Day held on May 14, 2016

Well, we are almost at the end of this academic year!

  is on May 21, 2016!

We started in September and had at least 25 classes. If my memory is right, Megha did not miss a single class! Go Megha!! But really,  it was a great pleasure to work with all the kids.

During this last class, Srikanth completed the poems he had started during the previous class - 'ಹಣ್ಣು ಮಾರುವವನ ಹಾಡು' ಮತ್ತು 'ಇರುವೆ ಇರುವೆ ಬಾ ಇರುವೆ'. ಯಾವ ಯಾವ ಹಣ್ಣುಗಳು ಯಾವ ಊರಲ್ಲಿ ಬೆಳೆಯುತ್ತಾರೆ ಅಂತ ಆ ಪದ್ಯವನ್ನು ಓದಿ ತಿಳಿಸಿದರು. ಹೊಸ ಹೊಸ ಪದಗಳನ್ನು ಸಹ ಹೇಳಿಕೊಟ್ಟರು. ಪದ್ಯದ ಸಾಹಿತ್ಯ ಈ ಬ್ಲಾಗ್ ನ ಕೊನೆಯಲ್ಲಿ ಲಗತ್ತಿಸಿದ್ದೇನೆ. For juniors, Mallik and Meena quizzed the kids on each alphabet by writing on the board and asking kids to recognize them.

For the last class on May 21, we will have an extended session starting at 3 pm and ending by 4.30 pm. This class will be held Mallik's house. All parents are welcome to join us at around 3.30 pm.

We have sent a feedback form along with the kids. Some kids may need help filling up the form. We will be asking them to read what they have written.

That's all for now. We will see you all this coming Saturday!

ಹಣ್ಣು ಮಾರುವವನ ಹಾಡು

ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತೀಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು

ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಸುವವು

ಗಂಜಾಮ್ ಅಂಜೀರ್
ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ ||

  - ಕಯ್ಯಾರ ಕಿಞ್ಞಣ್ಣ ರೈ (Kayyar Kinhanna Rai).