Tuesday, April 5, 2016

Kannada Play Day held on 04/02/2016

ನಮಸ್ಕಾರ! ಬಹಳ ದಿನಗಳ ಮೇಲೆ ನಮ್ಮ ಭೇಟಿ!
ಹೋದ ಶನಿವಾರ ದೊಡ್ಡ ಮಕ್ಕಳಿಗೆ ಶ್ರೀಮತಿ ಬಿ. ಆರ್. ಛಾಯ ಅವರ 'ಹಿಂದುಸ್ತಾನವು ಎಂದೂ ಮರೆಯದ' ಹಾಡಿನಿಂದ ಪಾಠ ಶುರು ಮಾಡಿದೆವು. ಅದಕ್ಕೆ ಮೊದಲು ಪ್ರತಿ ವಿದ್ಯಾರ್ಥಿ ಇಂದ ಅವರುಗಳು spring break ನಲ್ಲಿ ಏನು ಮಾಡಿದರು ಅಂತ ಕೇಳಿದೆವು. ಎಲ್ಲ ಮಕ್ಕಳೂ ಕನ್ನಡದಲ್ಲಿ (ಸ್ವಲ್ಪ ಕಷ್ಟಪಟ್ಟುಕೊಂಡು!) ಹೇಳಿದರು. ಮಕ್ಕಳಿಗೆ Red River Gorge Trip ಬಗ್ಗೆ ಬರೆದಿರುವ ಲೇಖನವನ್ನು ಓದಿಸಿದೆವು.

ನಿಮಗೆಲ್ಲಾ ಗೊತ್ತಿರೋ ಹಾಗೆ ಛಾಯಾ ಅವರು ಬರೋ ಶನಿವಾರ Cincinnati ಗೆ ಬಂದು ನಮ್ಮ 'ಸಿಂಚನ' ಆಚರಿಸುತ್ತಿರುವ ಯುಗಾದಿ ಹಬ್ಬದಲ್ಲಿ ಸುಮಧುರ ಕಂಠದಲ್ಲಿ ಹಾಡುಗಳನ್ನು ಹೇಳಿ ನಮ್ಮ ಮನ ತಣಿಸಲಿದ್ದಾರೆ. ಆ ಕಾರಣಕ್ಕೋಸ್ಕರ ನಮ್ಮ ಮಕ್ಕಳಿಗೆ ಅವರ ಹಾಡನ್ನು ಕೇಳಿಸಿದೆವು. ನಂತರ 'ಕನ್ನಡ ಪದಬಂಧ' (cross-word in Kannada) ಮಾಡಿದರು. ಸ್ವಲ್ಪ ಕಷ್ಟ ಆದರೂ ಹುಮ್ಮಸ್ಸಿನಿಂದ ಎಲ್ಲರೂ ಮುಗಿಸಿದರು! ನೀವೂ ಮಾಡಬೇಕೆಂದರೆ ಇಲ್ಲಿದೆ ನೋಡಿ - 'ಕನ್ನಡ ಪದಬಂಧ'.

ಚಿಕ್ಕ ಮಕ್ಕಳಿಗೆ ಹಿಂದೆ ಮಾಡಿದ ಕೆಲವು ಪಾಠಗಳನ್ನು ವಿಮರ್ಶೆ ಮಾಡಿದೆವು - ಬಣ್ಣಗಳು, ತರಕಾರಿ, ಹಣ್ಣುಗಳು, ಅಕ್ಷರಮಾಲೆ, ಮತ್ತು ವಾರಗಳು. 'ಒಳಗಡೆ ಹೊರಗಡೆ' ಅನ್ನುವ ಒಂದು ಆಟ ಸಹ ಆಡಿದರು.

ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ (04/09/2016) ಕನ್ನಡ ಶಾಲೆ ಇರುವುದಿಲ್ಲ.