ನಮಸ್ಕಾರ ಎಲ್ಲರಿಗೂ!
ಮಕ್ಕಳೆಲ್ಲಾ ಶನಿವಾರ ಬರೋದಕ್ಕೆ ಕಾಯ್ತಾ ಇರೋ ತರಹ ಇದೆ! ಹೌದು, ಈ ಶನಿವಾರ
ಯಥಾ ಪ್ರಕಾರ ನಮ್ಮ ಶ್ರೀಮಾನ್ ಮಲ್ಲಿಕ್ ಅವರ ಮನೆಯಲ್ಲೇ ಮಧ್ಯಾಹ್ನ
3 ಗಂಟೆಗೆ ಭೇಟಿಯಾಗೋಣ. ದಯವಿಟ್ಟು ಒಮ್ಮೆಯಾದರೂ ನಿಮ್ಮ ಮಕ್ಕಳಿಗೆ
ಕನ್ನಡ ಅಕ್ಷರಾಭ್ಯಾಸ ಮಾಡಿಸಿ. ಕನ್ನಡದಲ್ಲೇ ಮಾತನಾಡಿಸಿ.
ಒಂದು ಚಿಕ್ಕ ಸಂಗತಿ. ಏನಪ್ಪಾ ಅಂದ್ರೆ - ನಮ್ಮ ವಿದ್ಯಾರ್ಥಿನಿ ಮಾನಸಾಗೆ ಕನ್ನಡ
ಯಾಕೆ ಕಲಿ ಬೇಕು ಅಂತ ಕೇಳಿದ್ರೆ, ಅವಳು ಹೇಳಿದ್ಲು - 'ಕನ್ನಡದಲ್ಲಿ ಒಂದು
ಕವಿತೆ ರಚನೆ ಮಾಡಬೇಕು ಅಂಕಲ್'! ನೋಡಿ ಹೇಗಿದೆ ಅವಳ ಆಸೆ? ಹೋದ ವಾರ
ಅವಳ ಹುಟ್ಟಿದ ಹಬ್ಬಾನೂ ಇತ್ತು.
ಅದರ ಬಗ್ಗೆ -
ಹೋದ ವಾರ ಆಚರಿಸಿದ್ಲು ಹುಟ್ಟಿದ್ ಹಬ್ಬಾನ
ಅವರಪ್ಪ ಕೇಳಿದ್ರಂತೆ ಏನು ಬೇಕು ಅಂತ ಮಾನಸಾನ
ಚಾಕಲೆಟ, Cakeಅ, ಅಥವಾ ಏನಾದರೂ ಬಟ್ಟೆ ಬರೆನಾ?
ಹೇಳಿದ್ಳಂತೆ - ಕಲೀಬೇಕ್ಬರೆಯೋದಕ್ಕೆ ಕನ್ನಡದಲ್ಕವಿತೇನ!
ನಡೀ ಮಗಳೇ, ಮಲ್ಲಿಕ್ ಮನೇಲ್ಕನ್ನಡ ಕಲಿಯೋಣ!
ನೋಡೋಣ!
Kannada Play Day Team