Thursday, October 13, 2016

ಕನ್ನಡ ಶಾಲೆ - 10/೦೮/೨೦೧೬

ನಮಸ್ಕಾರ!
ಬಹಳ ದಿನಗಳಾದ ಮೇಲೆ ನಮ್ಮ ಭೇಟಿ. ಸ್ವಲ್ಪ ದಸರ ಹಬ್ಬದ ಗಲಾಟೆಯಲ್ಲಿ ಬರೆಯಲಿಕ್ಕಾಗಲಿಲ್ಲ.
ಹೋದ ಶನಿವಾರ ಮೂರೇ ಮಕ್ಕಳಿದ್ದರು ಮೇಲ್ವರ್ಗದಲ್ಲಿ. ಆದ್ದರಿಂದ ಮೇಘ ಮತ್ತು ದಿಶಾ ಅವರನ್ನ ಸೇರಿಸಿಕೊಂಡು ಒಂದು ಕಿರು ನಾಟಕ ಮಾಡಿದೆವು. ಇಂಗ್ಲಿಷ್ನಲ್ಲಿ ಬರೆದಿರೋ ಕಥೆಯನ್ನು ಓದಿ, ಅವರಿಗೆ ಅರ್ಥ ಮಾಡಿಸಿದ ಮೇಲೆ ಎರಡು ಗುಂಪುಗಳನ್ನು ಮಾಡಿದೆವು. ಆ ಗುಂಪುಗಳು ಪರಸ್ಪರ ಮಾತನಾಡಿ, ಅವರುಗಳೇ ೨೫ ನಿಮಿಷಗಳ ಅವಧಿಯಲ್ಲಿ ಆ ಕಥೆಯನ್ನು ಮೂಲವಾಗಿಟ್ಟುಕೊಂಡು, ಕನ್ನಡದಲ್ಲಿ ಸಂಭಾಷಣೆ ಬರೆದು, ಕಿರುನಾಟಕ ಮಾಡಬೇಕು. ಇದು ಅವರಿಗೆ ಕೊಟ್ಟ assignment. ಚೆನ್ನಾಗಿಯೇ ಮಾಡಿದರೆಂದು ಹೇಳಬೇಕು. ಇಲ್ಲಿದೆ ನೋಡಿ ಸಂಪೂರ್ಣ ಕಥೆ - "ವಿಶೇಷ ಬೀಸಣಿಗೆ". ಇದನ್ನೇ ಸಿಂಚನ ದೀಪಾವಳಿಯ ಸಂದರ್ಭದಲ್ಲಿ ಮಾಡಿಸೋಣವೆಂದುಕೊಂಡಿದ್ದೇವೆ. ನೋಡೋಣ. ಎರಡನೇ ಮತ್ತು ಮೂರನೇ ಪುಟಗಳನ್ನು print ಮಾಡಿಕೊಂಡು ಬಂದರೆ ಒಳ್ಳೆಯದು.
ಚಿಕ್ಕಮಕ್ಕಳ ವರ್ಗದಲ್ಲಿ  ಮೈತ್ರೇಯನೆಂಬ ಹೊಸ ಹುಡುಗ ಬಂದಿದ್ದರಿಂದ ಎಲ್ಲಾ ಮಕ್ಕಳು ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಆಯಿತು. 'ಅ' ಇಂದ 'ಹ' ವರೆಗೂ ಅಕ್ಷರಗಳನ್ನು ಬರೆಸಿ ಪ್ರತಿಯೊಬ್ಬರ ಹತ್ತಿರ ಹಲವು ಬಾರಿ ಹೇಳಿಸಿದೆವು. ನಂತರ 'ಅ' ಮತ್ತು 'ಆ' ಅಕ್ಷರಗಳಿಂದ ಗೊತ್ತಿರುವ ಪದಗಳನ್ನು ಹೇಳಲು ಕೇಳಿದೆವು. ಬರೋ ಶನಿವಾರ ಎಂದಿನಂತೆ ನಮ್ಮ ಮನೆಯಲ್ಲೇ (ಸಮೀರ) ನಡೆಯುತ್ತದೆ. ತಪ್ಪದೆ ನಿಮ್ಮ ಮಕ್ಕಳನ್ನ ಕಳಿಸಿ. ಬರಕ್ಕಾಗದೆ ಹೋದರೆ, ದಯವಿಟ್ಟು ಇ-ಪತ್ರದ ಮುಖಾಂತರ ತಿಳಿಸಿ.
    

No comments:

Post a Comment

Note: Only a member of this blog may post a comment.