Friday, January 27, 2017

Kannada Play Day - reminder for 01/28/2017

ನಮಸ್ಕಾರ ಎಲ್ಲರಿಗೂ!

ಮಕ್ಕಳೆಲ್ಲಾ ಶನಿವಾರ ಬರೋದಕ್ಕೆ ಕಾಯ್ತಾ ಇರೋ ತರಹ ಇದೆ! ಹೌದು, ಈ ಶನಿವಾರ 
ಯಥಾ ಪ್ರಕಾರ ನಮ್ಮ ಶ್ರೀಮಾನ್ ಮಲ್ಲಿಕ್ ಅವರ ಮನೆಯಲ್ಲೇ ಮಧ್ಯಾಹ್ನ 
3 ಗಂಟೆಗೆ ಭೇಟಿಯಾಗೋಣ. ದಯವಿಟ್ಟು ಒಮ್ಮೆಯಾದರೂ ನಿಮ್ಮ ಮಕ್ಕಳಿಗೆ 
ಕನ್ನಡ ಅಕ್ಷರಾಭ್ಯಾಸ ಮಾಡಿಸಿ. ಕನ್ನಡದಲ್ಲೇ ಮಾತನಾಡಿಸಿ.

ಒಂದು ಚಿಕ್ಕ ಸಂಗತಿ. ಏನಪ್ಪಾ ಅಂದ್ರೆ - ನಮ್ಮ ವಿದ್ಯಾರ್ಥಿನಿ ಮಾನಸಾಗೆ  ಕನ್ನಡ
ಯಾಕೆ ಕಲಿ ಬೇಕು ಅಂತ ಕೇಳಿದ್ರೆ, ಅವಳು ಹೇಳಿದ್ಲು - 'ಕನ್ನಡದಲ್ಲಿ ಒಂದು
ಕವಿತೆ ರಚನೆ ಮಾಡಬೇಕು ಅಂಕಲ್'! ನೋಡಿ ಹೇಗಿದೆ ಅವಳ ಆಸೆ?  ಹೋದ ವಾರ 
ಅವಳ ಹುಟ್ಟಿದ ಹಬ್ಬಾನೂ ಇತ್ತು. 

ಅದರ ಬಗ್ಗೆ - 

ಹೋದ ವಾರ ಆಚರಿಸಿದ್ಲು ಹುಟ್ಟಿದ್ ಹಬ್ಬಾನ  
ಅವರಪ್ಪ ಕೇಳಿದ್ರಂತೆ ಏನು ಬೇಕು ಅಂತ ಮಾನಸಾನ
ಚಾಕಲೆಟ, Cakeಅ, ಅಥವಾ ಏನಾದರೂ ಬಟ್ಟೆ ಬರೆನಾ?
ಹೇಳಿದ್ಳಂತೆ - ಕಲೀಬೇಕ್ಬರೆಯೋದಕ್ಕೆ ಕನ್ನಡದಲ್ಕವಿತೇನ!
ನಡೀ ಮಗಳೇ,  ಮಲ್ಲಿಕ್ ಮನೇಲ್ಕನ್ನಡ ಕಲಿಯೋಣ!

ನೋಡೋಣ!
Kannada Play Day Team

Kannada Play Day 01/20/17 - Cancelled

ನಮಸ್ಕಾರ!

Due to shortage of teachers and senior students, there will be no class tomorrow!

ನಾಳೆ ದಿನ ರಜ..
ಮಾಡಿರಿ ಮಜಾ!!

ಆದರೆ, ಹಿರಿಯ ಮಕ್ಕಳಿಗೆ ಪದಬಂಧ ಮನೆಗೆಲಸ ಕೊಟ್ಟಿದ್ದೇವೆ. ಅವರೇ ಮಾಡಿ ಮುಂದಿನ ವಾರ ಮಾಡಿಕೊಂಡು ಬರಬೇಕು. Please see attached. 

ತಂದೆ ತಾಯಿಯರು ಕಿರಿಯ ಮಕ್ಕಳಿಗೆ ಅಕ್ಷರಗಳನ್ನು ಮನೆಯಲ್ಲಿ ಅಭ್ಯಾಸ ಮಾಡಿಸಬೇಕಾಗಿ ವಿನಂತಿ. ಮಕ್ಕಳಿಗೆ ಈ ವಾರದ ಮನೆ ಕೆಲಸ:
೧. ಎಲ್ಲ ಅಕ್ಷರಗಳನ್ನು ಕಲಿತು ಗುರುತುಹಿಡಿಯಬೇಕು.
೨. ಪ್ರತಿಯೊಂದು ಅಕ್ಷರದಿಂದ ೩-೫ ಪದಗಳನ್ನು ಹೇಳಬೇಕು.

ಹೋದ ವಾರ ಶ್ರೀಕಾಂತ್ ಅವರು ಮತ್ತೊಂದು ಕನ್ನಡದ ಪದ್ಯ (ನಾವೆಲ್ಲಾ ಒಂದಾನೊಂದು ಕಾಲದಲ್ಲಿ ಕಲಿತಿದ್ದು!) - ಬಣ್ಣದ ತಗಡಿನ ತುತ್ತೂರಿ - ಹಿರಿಯ ಮಕ್ಕಳಿಗೆ 
ಹೇಳಿಕೊಟ್ಟರು. ಮಕ್ಕಳೆಲ್ಲ ಓದುವುದಕ್ಕೆ ಪ್ರಯತ್ನಪಟ್ಟರು. ಕೆಲವರು ಸುಲಭವಾಗೇ ಓದಿದರು.  ಅವರ ಕೈಯಲ್ಲಿ ಮತ್ತೊಂದು ಸಲ ದಯವಿಟ್ಟು ಓದಿಸಿ.

ಮೀನಾ ಅವರು ಎಂದಿನಂತೆ ಕಿರಿಯರಿಗೆ ಏನು ಮಾಡಿಸಿದರು ಅಂತ ಇ-ಪತ್ರದ ಮೂಲಕ ತಿಳಿಸಿದ್ದಾರೆ.

ಜನವರಿ ೧೪, ೨೦೧೭ 'ಕನ್ನಡ ಕಲಿ'ಯಲ್ಲಿ ಮಾಡಿದ ಪಾಠ ಕೆಳಗೆ ಬರೆದಿದ್ದೇನೆ.

೧. ಮಕ್ಕಳಿಗೆ ಚಾರ್ಟ್ ಮೂಲಕ ಮತ್ತೆ ಅಕ್ಷರಗಳೆಲ್ಲವನ್ನು ಅಭ್ಯಾಸ ಮಾಡಿಸಿದೆವು.
೨. ಚಾರ್ಟ್ನಲ್ಲಿ ತೋರಿಸಿದರೆ ಮಕ್ಕಳು ಅಕ್ಷರಗಳನ್ನು ಗುರುತು ಹಿಡಿಯುತ್ತಾರೆ. ಆದರೆ ಚಾರ್ಟ್ ಇಲ್ಲದೆ ಫ್ಲಾಶ್ ಕಾರ್ಡ್ಸ್ ಉಪಯೋಗಿಸಿದಾಗ ಮಕ್ಕಳು ಇನ್ನೂ ಅಕ್ಷರಗಳನ್ನು ಗುರುತಿಸಲು ಕಷ್ಟ ಪಡುತ್ತಿದ್ದಾರೆ. 
೩. ಅಕ್ಷರಗಳನ್ನು ತೋರಿಸಿ ಪದಗಳನ್ನು ಹೇಳಿಸಿದೆವು. ಕೊಟ್ಟ ಅಕ್ಷರದಿಂದ ಸುಮಾರು ಮಕ್ಕಳು ೪-೫ ಪದಗಳನ್ನು ಹೇಳಿದರು.
೪. ಕಾಗುಣಿತವನ್ನು ಪ್ರಥಮ ಬಾರಿ ಹೇಳಿಕೊಟ್ಟೆವು. ಒಂದು ಸಲ ಹೇಳಿ ಕೊಟ್ಟ ನಂತರ, ಎಲ್ಲ ಮಕ್ಕಳಿಗೂ ಒಂದೊಂದು ಅಕ್ಷರವನ್ನು ಕೊಟ್ಟು ಅದರ ಕಾಗುಣಿತವನ್ನು ಹೇಳಿಸಿದೆವು. 
೫. ಕೊನೆಯದಾಗಿ ಫ್ಲಾಶ್ ಕಾರ್ಡ್ಸ್ ಉಪಯೋಗಿಸಿ ಅಕ್ಷರಗಳ ಕ್ವಿಜ್ ಮಾಡಿದೆವು. ಸುಮಾರು ಮಕ್ಕಳು ಅಕ್ಷರಗಳನ್ನು ಗುರುತು ಹಿಡಿಯಲೇ ಇಲ್ಲ.

ಹೀಗೆಯೇ ಒಂದು ಚುಟುಕ - 

ಬಂದಿತಿನ್ನೊಂದು ಶನಿವಾರ
ನನಗಿದೆ ಆಫೀಸಿನ ತಲೆಭಾರ
ಏನು ಮಾಡುವುದೋ ಗೊತ್ತಾಗಲಿಲ್ಲ 
 ಹೇಳಿದಳು ನನ್ನಾಕೆ - ತಗೋ Tylenolಅ!

ನೋಡುವ ಮುಂದಿನ ಶನಿವಾರ!

Kannada Kali Team

Thursday, January 12, 2017

Kannada Play Day - 01/07/17

ಮಹಾ ಜನಗಳೇ, ತಾಯಿ ತಂದೆಯರೆ, ಮತ್ತು ಮಕ್ಕಳೇ,

ಏನಪ್ಪಾ ಇದು ಭಾಷಣ ಶುರುಮಾಡಿದರು ಇವ್ರು ಅಂದ್ಕೊಂಡ್ರಾ? ಇಲ್ಲಪ್ಪಾ, ಸುಮ್ನೆ ಅಷ್ಟೇ!ಹೋದ ಶನಿವಾರ ಏನೇನ್ ಮಾಡಿದ್ವಿ ಅಂತ ಹೇಳೋಕ್ಕೆ ಈ ಇ-ಪತ್ರ ಅಷ್ಟೆ. ಆ ನಡುಗೋ ಚಳಿ ಕಳೆದು ಸ್ವಲ್ಪ ಬೆಚ್ಚಗಾಗೋ ಹಾಗಿರುವಾಗ ಈ ಶನಿವಾರ ಸ್ವಲ್ಪ ಕನ್ನಡ ಕಲಿಬೋದಲ್ವೆ? ಸಂಕ್ರಾಂತಿ ಬೇರೆ! ಒಳ್ಳೆ ಶುಭ ದಿನ!

Anyway, ಶ್ರೀಕಾಂತ್ ಅವರು ಹಿರಿಯ ಮಕ್ಕಳಿಗೆ ಒಂದು ಪ್ರಸಿದ್ಧವಾದ ಪದ್ಯ ಶುರು ಮಾಡಿದರು. ಯಾವುದಪ್ಪ ಅಂದ್ರೆ - 'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?' ಓದುವುದಕ್ಕೂ ಸುಲಭ, ಅರ್ಥ ಆಗುವುದಕ್ಕೂ ಸುಲಭ ಅಂತ. ನಿಮ್ಮ ಮಕ್ಕಳಿಗೆ ಓದಿಕೊಂಡು ಬರಬೇಕು ಅಂತ ತಿಳಿಸಿದ್ದಾರೆ. ಸ್ವಲ್ಪ ಅವರ ಕೈಯಲ್ಲೇ ಓದಿಸಿ. 

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು.
ನಾಯಿ ಮರಿ ಕಳ್ಳ ಬಂದರೆ ಏನು ಮಾಡುವೆ.
ಕುಂಯ್ ಕುಂಯ್ ಬೌ ಬೌ ಎಂದು ಕೂಗಿ ಓಡಿಸುವೆ.
ನಾಯಿಮರಿ ನಾನು ಹೋಗಿ ತಿಂಡಿ ತರುವೆನು
ನಿನ್ನ ಮನೆಯ ನಾನು ಕಾಯುತಿರುವೆನು.

ಚಿಕ್ಕ ಮಕ್ಕಳಿಗೆ ಮೀನಾ ಅವರು ಹೀಗೆ ತಿಳಿಸಿದ್ದಾರೆ. 
೧. ಎಲ್ಲ ಮಕ್ಕಳು ಅ ಇಂದ ಅಹವರೆಗೂ ಮತ್ತು ಕ ಇಂದ ಜ್ಞವರೆಗೂ ಅಕ್ಷರಗಳನ್ನು ಚಾರ್ಟ್ನಲ್ಲಿ ಓದಿ ಹೇಳಿದರು.
೨. ಎಲ್ಲ ಮಕ್ಕಳಿಗೂ ಚಾರ್ಟ್ ಮೂಲಕ ಅಲ್ಲೊಂದು ಇಲ್ಲೊಂದು ಅಕ್ಷರಗಳನ್ನು ತೋರಿಸಿ ಗುರುತು ಹಿಡಿಯಲು ಹೇಳಿದೆವು. ಎಲ್ಲ ಮಕ್ಕಳು ಚೆನ್ನಾಗಿ ಅಕ್ಷರಗಳನ್ನು ಗುರುತು ಹಿಡಿದರು.
೩. ಚಾರ್ಟ್ ಮೂಲಕ ಎರಡು ಅಕ್ಷರಗಳನ್ನು ತೋರಿಸಿ ಅವರಿಗೆ ಅದನ್ನು ಗುರುತಿಸಿ ಓದಲು ಹೇಳಿದೆವು ಮತ್ತು ಹೇಗೆ ಅದರಿಂದ ಒಂದು ಅರ್ಥಪೂರ್ಣ ಪದವನ್ನು ಮಾಡಬಹುದು ಎಂದು ಹೇಳಿಕೊಟ್ಟೆವು.
೪. ಗಜ, ನರ, ಮರ, ತಳ, ಕದ, ಸರ, ರಸ,ಬಲ, ಎಡ, ವನ ಹೀಗೆ ಅನೇಕ ಎರಡು ಅಕ್ಷರದ ಪದಜೋಡಣೆಯನ್ನು ಮಾಡಿಸಿ ಆ ಪದಗಳ ಅರ್ಥಗಳನ್ನು ಹೇಳಿ ಕೊಟ್ಟೆವು.
೫. ಇದಲ್ಲದೆ ಎರಡು ಅಕ್ಷರಗಳು ಅಲ್ಲಲ್ಲಿ ತೋರಿಸಿ ಅವುಗಳನ್ನು ಗುರುತಿಸಲು ಹೇಳಿದೆವು. ಎಲ್ಲ ಮಕ್ಕಳು ಚೆನ್ನಾಗಿ ಗುರುತಿಸಿ ಹೇಳಿದರು.
೬. ಕೊನೆಯದಾಗಿ ನಾಳೆ ಪ್ರಿಯಾಳ ಹುಟ್ಟು ಹಬ್ಬ ಎಂದು ತಿಳಿದಾಗ, ಎಲ್ಲ ಮಕ್ಕಳಿಗೂ ಅವಳಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಕನ್ನಡದಲ್ಲಿ ಹೇಳಿಸಿದೆವು.

ಬರುತಿದೆ ಮಕರ ಸಂಕ್ರಾಂತಿ,
ಬೆಳಗಲಿ ನಿಮ್ಮೊಳಗಿನ ಕಾಂತಿ,
ತರಲಿ ಎಲ್ಲರಿಗೂ ಸುಖ ಶಾಂತಿ.

ಹಬ್ಬದ ಶುಭಾಶಯಗಳೊಂದಿಗೆ,

ನಿಮ್ಮವರೇ,
ಕನ್ನಡ ಕಲಿ Team