Sunday, March 13, 2016

Kannada Play Day - 03/12/2016

During this session, we had only four kids in the Senior section. So, instead of Jeopardy, we read a small story taken from the textbook. The story was stressing on the words like ಕೈ, ನೈ, etc. I have attached the story below. Whoever missed the class, please try to read the story. The second half was devoted to reviewing the song from the movie 'ಒಗ್ಗರಣೆ' written by Jayant Kaikini. It is a beautiful song listing different flavors from different regions of Karnataka. Here is the link to the video on Youtube - 'ಈ ಜನುಮವೇ' We will cover the second stanza in the next session.

For juniors, we played a game of Jeopardy for the first time! Looks like they enjoyed it a lot! The categories were - ಹಣ್ಣುಗಳು, ತರಕಾರಿ, ಅಡಿಗೆಮನೆ, ನಿಸರ್ಗ, ವಾರಗಳು. It was mostly based on guessing the pictures. Please check with your kids and let us know how they felt about it. We would like to do more of these as a revision.

That is all for this week. See you all next week.


ಈ ಜನುಮವೇ  

ಈ ಜನುಮವೇ ಆಹಾ! ದೊರಕಿದೆ ರುಚಿ ಸವಿಯಲು
ಆಹಾ ಈ ಜಗವಿದೆ ನವರಸಗಳಾ ಉಣ ಬಡಿಸಲು
ಬಿಸಿ ಬಿಸಿ ಇದೆ
ಬಿಸಿ ಬಿಸಿ ಇದೆ ನಳಪಾಕ ದಿನ ದಿನ ವಿನೂತನ
ಈ ಬಿಸಿಯು ಆರುವ ಮೊದಲೇ ಎಲ್ಲರ
ಜೊತೆಗೆ ಮೆಲ್ಲುವ ಕಲೆಯ ಜೀವನ
ಜನುಮವೇ ಈ ಜನುಮವೇ
ಆಹಾ ದೊರಕಿದೆ ರುಚಿ ಸವಿಯಲು

ಈ ಜಗವಿದೆ ನವ ರಸಗಳಾ ಉಣಬಡಿಸಲು

ಕುಚ್ಚಲು ಗಂಜಿ ಉಪ್ಪಿನಕಾಯಿ ಹೇಗೆ ಮಾಡಿದೆ ಗೆಳೆತನ?
ತುಪ್ಪಕ್ಕೆ ಬಿದ್ದ ಹೋಳಿಗೆಗೀಗ ಬೇಕು ಮಾವಿನ ರಸಾಯನ
ಹುಬ್ಬಳ್ಳಿ ರೊಟ್ಟಿ ಕಾಳು ತಿಂದೊನೆ ಗಟ್ಟಿ ಆಳು
ಮಂಡ್ಯಾದ ಮುದ್ದೆ ಬಾಡು ಉಂಡು ನೀ ನಿದ್ದೆ ಮಾಡು
ಅಂಕೋಲದ ಕೋಳಿ ಸಾರು ಮೂಗಲ್ಲೂ ನೀರು ಜೋರು
ಕುಂದಾಪುರ ಕಾಣೆ ಮೀನು, ಇನ್ನೆಲ್ಲೂ ಕಾಣೆ ನೀನು
ಹಂಚಿ ಉಂಡರೆ ಅಧಿಕವಾಗುವ ಸರಳ ಸ್ನೇಹದ ವಿರಳ ರುಚಿ ಇದು

ದುಡಿವ  ಜನರು  ಬಿಡುವಿನಲ್ಲಿ  ತೆರೆವ  ಬುತ್ತಿಯೇ  ಬಲು  ರುಚಿ
ಬೆರಳು  ಚೀಪಿ  ಉಂಡ  ಮನಕೆ  ಬದುಕಿನಲ್ಲಿಯೂ ಅಭಿರುಚಿ
ಮಾವಿನಕಾಯಿ ಚಿತ್ರಾನ್ನಾನ ಮೈಸೂರಲ್  ತಿನ್ನೋನ್  ಜಾಣ
ಮನೆಗೆ ಎಷ್ಟೇ ನೆಂಟರು ಬರಲಿ, ಮಲೆನಾಡಿನಲ್ಲಿ ತಾಜಾ ತಂಬ್ಳಿ
ದಾವಣಗೆರೆ  ಬೆಣ್ಣೆ  ದೋಸೆ ಈ ಊರಲ್ಲಿ  ತಿನ್ನೋ  ಆಸೆ
ಮೊಟ್ಟೆ ಮತ್ತು ಬಿರಿಯಾನಿಗೆ ಬಾ ಬಾರೋ ಬೆಳಗಾವಿಗೆ
ಒಲೆಯ ಮುಂದೆ ಉರಿವ ಅಮ್ಮನ ಮಮತೆಯಿಂದಲಿ ಕಲಿತ ಫಲವಿದು

By Jayant Kaikini

No comments:

Post a Comment

Note: Only a member of this blog may post a comment.